VIDEO: ಏರ್ಪೋರ್ಟ್​​ನಲ್ಲಿ ಮಹಿಳಾ ಅಧಿಕಾರಿಯಿಂದ ನಟಿ ಕಂಗನಾಗೆ ಕಪಾಳ ಮೋಕ್ಷ?

author-image
Ganesh Nachikethu
Updated On
VIDEO: ಏರ್ಪೋರ್ಟ್​​ನಲ್ಲಿ ಮಹಿಳಾ ಅಧಿಕಾರಿಯಿಂದ ನಟಿ ಕಂಗನಾಗೆ ಕಪಾಳ ಮೋಕ್ಷ?
Advertisment
  • ಬಾಲಿವುಡ್​ ನಟಿ ಕಂಗನಾ ರಣಾವತ್​ಗೆ ಕಪಾಳ ಮೋಕ್ಷ ಆರೋಪ
  • ಚಂಡೀಗಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ
  • ಸಿಐಎಸ್​ಎಫ್​​​ ಅಧಿಕಾರಿ ಕುಲ್ವಿಂದರ್​ ಕೌರ್​ ಎಂಬುವರಿಂದ ಹಲ್ಲೆ!

ಚಂಡೀಗಡ: ಇಂದು ಚಂಡೀಗಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನೂತನ ಸಂಸದೆ ಮತ್ತು ಬಾಲಿವುಡ್​ ನಟಿ ಕಂಗನಾ ರಣಾವತ್​ಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸೇವೆಯಲ್ಲಿ ಇರುವಾಗಲೇ ಸಿಐಎಸ್​ಎಫ್​​​ ಅಧಿಕಾರಿ ಕುಲ್ವಿಂದರ್​ ಕೌರ್​ ಎಂಬ ಮಹಿಳೆ ತನಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.

ಈ ಹಿಂದೆ ಕಂಗನಾ ರಣಾವತ್​ ರೈತ ವಿರೋಧಿ ಹೇಳಿಕೆ ನೀಡಿದ್ದರು ಎನ್ನುವ ಆರೋಪ ಇದೆ. ಹಾಗಾಗಿ ಕಂಗನಾ ಅವರಿಗೆ ಸಿಐಎಸ್​ಎಫ್​​​ ಅಧಿಕಾರಿ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ವರದಿಯಾಗಿದೆ. ಕಂಗನಾ ರಣಾವತ್​​​ ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಚರ್ಚೆಗಿಳಿದ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.


">June 6, 2024

ತಮ್ಮ ಸಹಜ ಅಭಿನಯದಿಂದಲೇ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿರೋ ಬಾಲಿವುಡ್ ನಟಿ ಕಂಗನಾ ರಣಾವತ್​​ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಬಿಜೆಪಿಯಿಂದ ನಿಂತು ನಟಿ ಕಂಗನಾ ಬರೋಬ್ಬರಿ 74,755 ಮತಗಳ ಅಂತರದಿಂದ ಗೆದ್ದಿದ್ದಾರೆ.

ಇದನ್ನೂ ಓದಿ: ಪಾಕ್​​ ವಿರುದ್ಧ ರೋಚಕ ಪಂದ್ಯ.. ಕೊಹ್ಲಿ ರೋಲ್​ ಬಗ್ಗೆ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ರೋಹಿತ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment